ಬಿಗ್ ಬಾಸ್ ಕನ್ನಡ ಮನೆಯಿಂದ ಹೊರಬಂದಿರುವ ಮಂಜುನಾಥ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕಳೆದ ವಾರ ಎಲಿಮಿನೇಟ್ ಆಗಿದ್ದ ಲಿಖಿತ್ ಅವರು ಮಂಜು ಅವರಿಗೆ ವಿಶೇಷವಾಗಿ ಸರ್ಪ್ರೈಸ್ ನೀಡಿ ಕೇಕ್ ಕಟ್ ಮಾಡಿಸುವ ಮೂಲಕ ತಮ್ಮ ಬಾಂಧವ್ಯವನ್ನು ಸಾಬೀತುಪಡಿಸಿದ್ದಾರೆ. ಬಿಗ್ ಬಾಸ್ ಸ್ನೇಹದ ಈ ಸುಂದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.