ಕಾಲ ಉರುಳಿದಂತೆ ಎಂತಹದ್ದೇ ದೊಡ್ಡ ಗಾಯವೂ ಮಾಸುತ್ತದೆ ಎನ್ನುತ್ತಾರೆ. ಆದರೆ ಭಾರತೀಯ ಕ್ರಿಕೆಟ್‌ನ ಇಬ್ಬರು ಧ್ರುವತಾರೆಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಪಾಲಿಗೆ 2023ರ ನವೆಂಬರ್ 19ರ ಗಾಯ ಮಾತ್ರ ಇಂದಿಗೂ ಹಸಿರಾಗಿಯೇ ಉಳಿದಿದೆ. ಇದಕ್ಕೆ ಸಾಕ್ಷಿ ಇತ್ತೀಚೆಗೆ ಇಬ್ಬರು ದಿಗ್ಗಜರು ನೀಡಿರುವ ಹೇಳಿಕೆಗಳು.