ಜಾಗತಿಕ ಮಟ್ಟದಲ್ಲಿ ದೊಡ್ಡ ದೊಡ್ಡ ಐಟಿ ಹಾಗೂ ಮಲ್ಟಿನ್ಯಾಷನಲ್‌ ಕಂಪನಿಗಳು ಆರ್ಥಿಕ ಸಮಸ್ಯೆ ನೆಪವೊಡ್ಡಿ ಸಾವಿರಾರು ಉದ್ಯೋಗಿಗಳನ್ನ ವಜಾಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಅಮೆರಿಕ ಮೂಲದ ಫ್ಲೇವರ್ಡ್ ಸಿರಪ್ ತಯಾರಿಕಾ ಕಂಪನಿ ಟೊರಾನಿ (Torani)ಯ ಸಿಇಒ ಮೆಲಾನಿ ಡಲ್ಬೆಕ್ಕೊ ಅವರ ಮಾತುಗಳು ಕಾರ್ಪೊರೇಟ್ ವಲಯದಲ್ಲಿ ಹೊಸ ಭರವಸೆ ಮೂಡಿಸಿವೆ.