ನಟ ಅನುಪಮ್ ಖೇರ್, ಬಾಲಿವುಡ್​​ನ ಅತ್ಯಂತ ಜನಪ್ರಿಯ ಮತ್ತು ಪ್ರತಿಷ್ಠಿತ ನಟನಾ ಶಾಲೆಯನ್ನು ಸಹ ನಡೆಸುತ್ತಾರೆ. ಅನುಪಮ್ ಖೇರ್ ಅವರ ‘ಆಕ್ಟರ್ಸ್ಟ್ ಪ್ರಿಪೇರ್’ ಶಾಲಯಲ್ಲಿ ಈಗ ಬಾಲಿವುಡ್​​ನಲ್ಲಿ ಹೆಸರು ಮಾಡಿರುವ ಹಲವು ಜನಪ್ರಿಯ ತಾರೆಯರು ಕಲಿತಿದ್ದಾರೆ. ಅವರಲ್ಲಿ ನಟಿ ದೀಪಿಕಾ ಪಡುಕೋಣೆ ಸಹ ಒಬ್ಬರು. ನಟನಾ ಶಾಲೆಯಲ್ಲಿ ನಡೆದ ಘಟನೆಯೊಂದನ್ನು ಖೇರ್ ವಿವರಿಸಿದ್ದಾರೆ.