ಉತ್ತರ ಕರ್ನಾಟಕದ ಪ್ರಮುಖ ಆಹಾರವಾದ ಜೋಳದ ಬೆಲೆ ದುಪ್ಪಟ್ಟಾಗಿದ್ದು, ಜನ ಸಾಮಾನ್ಯರ ದಿನನಿತ್ಯದ ಆಹಾರಕ್ಕೆ ಸಂಕಷ್ಟ ಎದುರಾಗಿದೆ. ಕ್ವಿಂಟಲ್‌ ಜೋಳದ ಬೆಲೆ 10 ಸಾವಿರ ರೂ. ಗಡಿ ದಾಟಿದ್ದು, ಖಾನಾವಳಿಗಳು ಊಟದ ದರ ಏರಿಸುವ ಆತಂಕದಲ್ಲಿದ್ದಾರೆ.