ಬೆಂಗಳೂರಿನಲ್ಲಿ ನಡೆಯಬೇಕಿದ್ದ ಭಾರತ-ವೆಸ್ಟ್ ಇಂಡೀಸ್ T20 ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಟಾಸ್ ವಿಳಂಬವಾಗಿದೆ. ಪಂದ್ಯದ ಆರಂಭ ಅನಿಶ್ಚಿತವಾಗಿದ್ದು, ಓವರ್‌ಗಳನ್ನು ಕಡಿತಗೊಳಿಸಿ ಪಂದ್ಯ ನಡೆಸುವ ಸಾಧ್ಯತೆ ಇದೆ. ಫಲಿತಾಂಶ ನಿರ್ಧಾರಕ್ಕೆ ಕನಿಷ್ಠ 5 ಓವರ್‌ಗಳ ಆಟ ಅನಿವಾರ್ಯ. ರಾತ್ರಿ 9:41ರೊಳಗೆ ಪಂದ್ಯ ಆರಂಭವಾಗದಿದ್ದರೆ ರದ್ದಾಗುವ ಸಾಧ್ಯತೆಯಿದೆ.