ಭಾರತದಲ್ಲಿ ಉಪಗ್ರಹ ಇಂಟರ್‌ನೆಟ್ ಸೇವೆ ಒದಗಿಸಲು ರಿಲಯನ್ಸ್ ಮತ್ತು ಎಲೋನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ನಿಯಮಗಳನ್ನು ಪಾಲಿಸಿದರೆ ಸ್ಪರ್ಧೆ ಸ್ವಾಗತಾರ್ಹ ಎಂದು ರಿಲಯನ್ಸ್ ಹೇಳಿದ್ದರೆ, ಸೇವೆ ನೀಡಲು ತಾನು ಸಿದ್ಧ ಎಂದು ಸ್ಟಾರ್‌ಲಿಂಕ್ ತಿಳಿಸಿದೆ.