'ಪ್ರೇಮದ ಊರಲ್ಲಿ' (Premada Ooralli) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದೆ. ಬಿಡುಗಡೆಯಾದ 31ನೇ ದಿನವಾದ ಅಕ್ಟೋಬರ್ 26, ಸೋಮವಾರದ ವೇಳೆಗೆ ಭಾರತದಲ್ಲಿ ಚಿತ್ರದ ನೆಟ್ ಕಲೆಕ್ಷನ್ ₹100 ಕೋಟಿ ಗಡಿ ದಾಟಿದೆ. ವಿವಿಧ ಟ್ರೇಡ್ ಟ್ರ್ಯಾಕರ್ಸ್‌ಗಳ ಲೆಕ್ಕಾಚಾರದ ಪ್ರಕಾರ, ದೇಶಾದ್ಯಂತ ಈ ಚಿತ್ರದ ಗಳಿಕೆ ₹100 ಕೋಟಿಯಿಂದ ₹101.22 ಕೋಟಿ ನೆಟ್ ತಲುಪಿದೆ.