ದೊಡ್ಡಬಳ್ಳಾಪುರ: ‘ಸೋತಿರುವವರು ಮನೆಯಲ್ಲಿ ಇರಬೇಕು, ಇಲ್ಲವೆ ಜನರೊಂದಿಗೆ ಇದ್ದು ಅವರ ವಿಶ್ವಾಸಗಳಿಸಬೇಕು. ಈ ಎರಡನ್ನೂ ಮಾಡದೆ ಸರ್ಕಾರದ ಕಾರ್ಯಕ್ರಮಗಳಿಗೆ ಬಂದು ಶಿಷ್ಟಾಚಾರದ ನೆಪದಲ್ಲಿ ಗದ್ದಲ ಮಾಡಿದರೆ ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ಶಾಸಕ ಧೀರಜ್‌ ಮುನಿರಾಜ್‌ ಅವರು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹೆಸರು ಹೇಳದೆ ಗುಡುಗಿದರು.