ಚಂಡೀಗಢ: LGBTQ ಸಮುದಾಯದ ಸಾಮಾಜಿಕ ಜಾಲತಾಣದ ಪ್ರಭಾವಿ ಮತ್ತು ಮೇಕಪ್ ಕಲಾವಿದ ಮದ್ ಸಂಧು ಅವರನ್ನು ಅಮೃತಸರದಲ್ಲಿ ಗುಂಡಿಕ್ಕಿ ಹತ್ಯೆಮಾಡಲಾಗಿದೆ. ರಸ್ತೆಯಲ್ಲಿ ಗುಂಡಿನ ದಾಳಿ ನಡೆದ ಬಳಿಕ ರಕ್ತದ ಮಡುವಿನಲ್ಲಿ ಸಂಧು ಬಿದ್ದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.