ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ‘ಬೆಂಗಳೂರು ಜಾತ್ರೆ’ಗೆ ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ರಸ್ತೆ ಗುಂಡಿ, ಮೂಲಸೌಕರ್ಯ ಕೊರತೆ ನಡುವೆ 200 ಕೋಟಿ ರೂ. ವೆಚ್ಚದ ಜಾತ್ರೆ ಬದಲು ರೈತರಿಗೆ ನೆರವು ನೀಡಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ರೈತರು ಬದುಕಿದರೆ ಮಾತ್ರ ರಾಜ್ಯಕ್ಕೆ ಉಳಿವು.