ಬ್ರಹ್ಮಾಂಡದಲ್ಲಿ ನಮ್ಮ ಭೂಮಿಯೇ ಅನನ್ಯವೇ? ಅಥವಾ ಬೇರೆಡೆ ಜೀವವಿದೆಯೇ? ಇದು ಮನುಕುಲದ ಉತ್ತರವಿಲ್ಲದ ಸಂಕೀರ್ಣ ಪ್ರಶ್ನೆಗಳಲ್ಲಿ ಒಂದಾಗಿದೆ. ಭೂಮಿಯ ಮೇಲೆ ಜೀವಿಗಳ ಉಗಮ ಹೇಗಾಯ್ತು? ಅಣುಗಳ ಮಿಶ್ರಣವು ರಾಸಾಯನಿಕ ಹಂತದಿಂದ ಜೀವವೈಜ್ಞಾನಿಕ ಹಂತಕ್ಕೆ ಹೇಗೆ ಪರಿವರ್ತನೆಗೊಂಡಿತು ಎಂಬುದಕ್ಕೆ ಕಾರಣವಾದ ಪರಿಸ್ಥಿತಿಗಳನ್ನು ಸಂಶೋಧನೆಗಳು ಪರಿಶೋಧಿಸುತ್ತಿವೆ.