ಮುಂಬೈ: ನಟ ಟೈಗರ್ ಶ್ರಾಫ್ (Tiger Shroff) ಅವರ ಮೇಲೆ ನಡೆದ ಗುಂಡಿನ ದಾಳಿಯ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಪೊಲೀಸರ ಅಪರಾಧ ವಿಭಾಗವು, ಹರಿಯಾಣದ ಸೋನಿಪತ್ ಜಿಲ್ಲೆಯಿಂದ 12ನೇ ಆರೋಪಿ ಅಮನ್ ಎಂಬಾತನನ್ನು ಬಂಧಿಸಿದೆ. ಈತ ಈಗಾಗಲೇ ಬಂಧಿತನಾಗಿರುವ ಕುನಾಲ್ ಜಮಿನ್‌ಸಿಂಗ್ ಎಂಬಾತನ ಆಪ್ತನಾಗಿದ್ದ.