ಮಳೆಗಾಲದ ಜಿಟಿ ಜಿಟಿ ಹನಿಗಳು, ಮೈಕೊರೆಯುವ ಚಳಿ… ಈ ಸುಂದರ ವಾತಾವರಣದಲ್ಲಿ ಭಾನುವಾರದ ಹೊತ್ತಲ್ಲಿ ಮನೆಯ ಕಿಟಕಿಯ ಬಳಿ ಕುಳಿತು ಬಿಸಿ-ಬಿಸಿಯಾಗಿ ಏನಾದರೂ ತಿನ್ನುವ ಮಜಾನೇ ಬೇರೆ! ಅಂಥಾ ಸಂದರ್ಭದಲ್ಲಿ ಹೊರಗೆ ಹೋಗಿ ತರಲು ಮಳೆ ಅಡ್ಡಿಯಾದರೆ ಚಿಂತೆ ಯಾಕೆ? ನೀವೇ ಮನೆಯಲ್ಲೇ ಹದವಾದ ಬಿಸಿ-ಬಿಸಿಯಾದ ಕ್ರಿಸ್ಪಿ ಚೀಸ್ ಬಾಲ್ಸ್‌ ತಯಾರಿಸಿ ಸವಿಯಬಹುದು.