ರಾಜ್ಯ ಕಂದಾಯ ಇಲಾಖೆಯು ಆಸ್ತಿ ನಿರ್ವಹಣೆ ಮತ್ತು ನಿವೇಶನಗಳ ವಿಂಗಡಣೆಯನ್ನು ಸರಳೀಕರಿಸಲು 'ಇ-ಆಸ್ತಿ 2.0' ಯೋಜನೆಯನ್ನು ಜಾರಿಗೆ ತಂದಿದೆ. ಅರ್ಧ ಎಕರೆವರೆಗಿನ ಜಮೀನಿಗೆ ಸ್ವಯಂ ಡಿಕ್ಲೇರೇಷನ್, ಜಂಟಿ ಮಾಲೀಕರ ಸುಲಭ ವಿಂಗಡಣೆ ಮತ್ತು ಲೇಔಟ್ ನಿರ್ಮಾಣ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.