ಪವನ್ ಕಲ್ಯಾಣ್, ಆಂಧ್ರ ಪ್ರದೇಶ ಉಪ ಮುಖ್ಯ ಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರ ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಿವೆ. ಆದರೆ ಆ ಮೂರೂ ಸಿನಿಮಾಗಳನ್ನು ಅವರು ಡಿಸಿಎಂ ಆಗುವ ಮುಂಚೆ ಒಪ್ಪಿಕೊಂಡಿದ್ದರು. ಆ ಮೂರೂ ಸಿನಿಮಾಗಳ ಹಲವು ಭಾಗದ ಚಿತ್ರೀಕರಣವನ್ನು ಅವರು ಡಿಸಿಎಂ ಆದ ಬಳಿಕವೇ ಚಿತ್ರೀಕರಿಸಲಾಗಿದೆ.