ಸಿನಿಮಾದ ಅಂತರಾಷ್ಟ್ರೀಯ ಟ್ರೈಲರ್ ಮತ್ತು ಭಾರತೀಯ ಪ್ರೇಕ್ಷಕರಿಗಾಗಿ ಒಂದು ವಿಶೇಷ ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತು. ನಟ ಯಶ್ ಸೇರಿದಂತೆ ಸಿನಿಮಾದ ಹಲವು ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಯಶ್, ಸಿನಿಮಾದ ಬಗ್ಗೆ ಮಾತನಾಡುವ ಜೊತೆಗೆ ಬೇರೆ ಕೆಲವು ವಿಷಯಗಳನ್ನು ಸಹ ಪರೋಕ್ಷವಾಗಿ ಹಂಚಿಕೊಂಡರು.