ಕೃತಕ ಬುದ್ಧಿಮತ್ತೆ (AI) ಆಧಾರಿತ ಬ್ಯುಸಿನೆಸ್ ಮಾಡಲ್​ನತ್ತ ವೇಗವಾಗಿ ಸಾಗುತ್ತಿರುವ ಜರ್ಮನಿಯ ಸಾಫ್ಟ್‌ವೇರ್ ದೈತ್ಯ ಸ್ಯಾಪ್ (SAP), ಜಾಗತಿಕವಾಗಿ ಕನಿಷ್ಠ 10,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸುತ್ತಿದೆ. ಇದರಿಂದ ಭಾರತದಲ್ಲಿರುವ ಉದ್ಯೋಗಿಗಳ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ. ಭಾರತದಲ್ಲಿ ಸ್ಯಾಪ್​ನ 16,000 ಉದ್ಯೋಗಿಗಳಿದ್ದಾರೆ.