ಅಮೆರಿಕ ವಿದೇಶಾಂಗ ಸಚಿವ ಮಾರ್ಕೊ ರೂಬಿಯೋ ಅವರು ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಯನ್ನು ಭೇಟಿ ಮಾಡುತ್ತಿದ್ದಾರೆ. ಎರಡು ದಿನದ ಭಾರತದ ಭೇಟಿಯಲ್ಲಿರುವ ರೂಬಿಯೋ ಇಂದು ಗುಜರಾತ್​ನ ಜಾಮ್​ನಗರದ ರಿಲಯನ್ಸ್ ಘಟಕಕ್ಕೆ ಬರುತ್ತಿದ್ದಾರೆ. ಜಾಗತಿಕ ತೈಲ ಬಿಕ್ಕಟ್ಟು ಸ್ಥಿತಿ ಹಿನ್ನೆಲೆಯಲ್ಲಿ ರಿಲಯನ್ಸ್ ನೆರವು ಅಮೆರಿಕಕ್ಕೆ ಅಗತ್ಯವಿದ್ದಂತಿದೆ.