ಇದು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದ್ದು, ಸಿನಿಮಾಕ್ಕಾಗಿ ಭರ್ಜರಿ ಪ್ರಚಾರ ಮಾಡಲಾಗಿದೆ. ಭಾರತದ ಸಿನಿಮಾ ಮಾರುಕಟ್ಟೆ ಮಾತ್ರವೇ ಅಲ್ಲದೆ ವಿಶ್ವ ಸಿನಿಮಾ ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡು ಸಿನಿಮಾದ ಪ್ರಚಾರ ಮಾಡಲಾಗಿದ್ದು, ಅದಕ್ಕೆ ತಕ್ಕಂತೆ ಅಡ್ವಾನ್ಸ್ ಬುಕಿಂಗ್ ಸಹ ಜೋರಾಗಿದೆ.