'ರಾಮಾಯಣ' ಚಿತ್ರದಲ್ಲಿ ಸೀತಾ ಮಾತೆಯ ಪಾತ್ರದಲ್ಲಿ ನಟಿಸಿರುವ ಪ್ರತಿಭಾವಂತ ನಟಿ ಸಾಯಿ ಪಲ್ಲವಿ ಅವರನ್ನು ರಾಕಿಂಗ್ ಸ್ಟಾರ್ ಯಶ್ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಅವರಲ್ಲಿ ಸ್ತ್ರೀ ಸಹಜ ಒಳಶಕ್ತಿ, ದೈವಿಕ ಭಾವನೆ ಹಾಗೂ ಮುಖದಲ್ಲಿ ವಿಶೇಷ ತೇಜಸ್ಸು ಇದೆ ಎಂದು ಕೊಂಡಾಡಿದ್ದಾರೆ .