ಬರ್ಲಿನ್: ಜರ್ಮನಿಯ (Germany) ಬೋಚಮ್ ನಗರದಲ್ಲಿನ ವಸತಿ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಭಾರತೀಯರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. 25 ಮತ್ತು 27 ವರ್ಷ ವಯಸ್ಸಿನ ಇಬ್ಬರು ಯುವತಿಯರು ಹಾಗೂ 26 ವರ್ಷದ ಯುವಕ ಸಾವಿಗೀಡಾಗಿದ್ದಾರೆ.