ಅಬುಧಾಬಿ ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ ಭಾರತೀಯ ಮೂಲದ ನಿವಾಸಿಗಳು ಭಾರಿ ಅದೃಷ್ಟ ಗಳಿಸಿದ್ದಾರೆ. ಅರುಣ್ ಕೃಷ್ಣಪ್ಪ ಕಿಡಿಯೂರು, ಷರೀಫ್ ಸೇರಿ ನಾಲ್ವರು 200 ಗ್ರಾಂ ತೂಕದ 24-ಕ್ಯಾರಟ್ ಚಿನ್ನದ ಬಿಸ್ಕತ್ ಗೆದ್ದಿದ್ದಾರೆ. ಪ್ರತಿ ಬಿಸ್ಕತ್‌ನ ಮೌಲ್ಯ ಸುಮಾರು ₹25.02 ಲಕ್ಷ. ಉಡುಪಿ, ಬೆಂಗಳೂರು, ಕೇರಳ ಮತ್ತು ಶಾರ್ಜಾದ ಭಾರತೀಯರು ಈ ವಿಜಯ ಸಾಧಿಸಿದ್ದಾರೆ.