ಭಾರತದ ಅತಿ ಶ್ರೀಮಂತ ಬಡವ ಎಂಬ ಬಿರುದು ಕೇಳಿದ ತಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವ ಏಕೈಕ ಮಾದರಿ ವ್ಯಕ್ತಿತ್ವ ಪಾಲಂ ಕಲ್ಯಾಣಸುಂದರಂ ಅವರದ್ದು. ತಮಿಳುನಾಡಿನ ನಿವೃತ್ತ ಗ್ರಂಥಪಾಲಕರಾಗಿರುವ ಇವರು, ತಮ್ಮ ಇಡೀ ಜೀವಮಾನವನ್ನ ಸಮಾಜದ ಒಳಿತಿಗಾಗಿ ಹಾಗೂ ಬಡವರ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದಾರೆ.