ಬಾಗಲಕೋಟೆ: ಆರ್‌ಎಸ್‌ಎಸ್ (RSS) ದೈಹಿಕ ಶಿಕ್ಷಕ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮುಧೋಳ ನಗರದಲ್ಲಿ ನಡೆದಿದೆ. ಪ್ರಮೋದ್ ಮಮದಾಪುರ (44) ಮೃತ ವ್ಯಕ್ತಿ. ಇವರು ಜಮಖಂಡಿ ಭಾಗದ ಆರ್‌ಎಸ್‌ಎಸ್ ದೈಹಿಕ ಶಿಕ್ಷಕರಾಗಿದ್ದರು. ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ದಂಡ ಪ್ರಹಾರ, ಕರಾಟೆ ಸೇರಿದಂತೆ ದೈಹಿಕ ಶಿಕ್ಷಣ ತರಬೇತಿ ನೀಡುತ್ತಿದ್ದರು.