ನವರಾತ್ರಿ ಹಬ್ಬದ ಸಂಭ್ರಮ ನಾಡಿನೆಲ್ಲೆಡೆ ಮನೆಮಾಡಿದ್ದು, ಕರಾವಳಿಯ ಪ್ರಸಿದ್ಧ ಆಚರಣೆಯಾದ ಮಂಗಳೂರು ದಸರಾ 2026 ಕಳೆಗಟ್ಟಿದೆ. ಹಬ್ಬದ ರಜೆಯಲ್ಲಿ ತೀರ್ಥಯಾತ್ರೆ ಕೈಗೊಳ್ಳುವ ಭಕ್ತರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಸ್ತೆ ಸಾರಿಗೆ ನಿಗಮ (KSRTC) ವಿಶೇಷ ಮತ್ತು ಅತ್ಯಂತ ಕೈಗೆಟುಕುವ ದರದಲ್ಲಿ ಒಂದಿಷ್ಟು ದೇವಾಲಯ ದರ್ಶನ ಪ್ಯಾಕೇಜ್‌ಗಳನ್ನ ಘೋಷಿಸಿದೆ.