ಬೆಂಗಳೂರು: ರಾಜ್ಯದಲ್ಲಿ ಹವಾಮಾನದಲ್ಲಿ ಸ್ವಲ್ಪ ಬದಲಾವಣೆ ಶುರುವಾಗಿದ್ದು, ನೈಋತ್ಯ ಮುಂಗಾರು ಸಂಪೂರ್ಣವಾಗಿ ನಿರ್ಗಮನದ ಹಂತದಲ್ಲಿದೆ. ಇನ್ನೆರಡು-ಮೂರು ದಿನಗಳಲ್ಲಿ ಈಶಾನ್ಯ ಮುಂಗಾರು ಪ್ರವೇಶ ಮಾಡುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.