ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 250 ರನ್ ಬಾರಿಸಿದರೂ ಟೀಂ ಇಂಡಿಯಾ ಸೋಲನುಭವಿಸಿದೆ. ಈ ಸೋಲಿಗೆ ಇಬ್ಬನಿ ಹಾಗೂ ಶಾಯ್ ಹೋಪ್-ರೂಥರ್ ಫೋರ್ಡ್ ಜೊತೆಯಾಟವೇ ಮುಖ್ಯ ಕಾರಣ ಎಂದು ನಾಯಕ ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ. ಈ ಪಂದ್ಯದಲ್ಲಿ ಒಟ್ಟು 501 ರನ್ ದಾಖಲಾಗಿದ್ದು, ಇದು ಟಿ20 ಇತಿಹಾಸದ 2ನೇ ಗರಿಷ್ಠ ರನ್ ಚೇಸ್ ಆಗಿದೆ.