ಬಾಲಿವುಡ್​​ ಸ್ಟಾರ್ ನಟ-ನಟಿಯರನ್ನು ಆಹ್ವಾನಿಸಿ ಅವರೊಟ್ಟಿಗೆ ಹಲವು ವಿಷಯಗಳನ್ನು ಕರಣ್ ಚರ್ಚೆ ಮಾಡುತ್ತಿದ್ದರು. ಶೋ ಭಾರಿ ಜನಪ್ರಿಯತೆ ಗಳಿಸಿತು. ಸಾಕಷ್ಟು ವಿವಾದಗಳಿಗೂ ಸಹ ಕಾರಣವಾಯ್ತು. ಈ ಶೋ ಇಂದಾಗಿ ಹಲವು ಜೋಡಿಗಳು ಬೇರ್ಪಟ್ಟರೆ, ಕೆಲವರು ಒಂದಾದರು. ಈ ವರೆಗೆ ‘ಕಾಫಿ ವಿತ್ ಕರಣ್’ನ ಎಂಟು ಸೀಸನ್ ಪ್ರಸಾರವಾಗಿದ್ದು, ಇದೀಗ ಒಂಬತ್ತನೇ ಸೀಸನ್ ಪ್ರಸಾರ ಆಗಲಿದೆ.