ಮಲಯಾಳಂ ಚಿತ್ರರಂಗದ ಮೆಗಾಸ್ಟಾರ್ ಮಮ್ಮುಟ್ಟಿ ಅವರಿಗೆ ಸಿನಿಮಾಗಳಷ್ಟೇ ಅಲ್ಲ, ಕಾರುಗಳ ಬಗ್ಗೆಯೂ ವಿಶೇಷ ಆಸಕ್ತಿ ಇದೆ. ಅವರ ಬಳಿ ಇರುವ ಐಷಾರಾಮಿ ಕಾರುಗಳ ಸಂಗ್ರಹವೇ ಇದಕ್ಕೆ ಸಾಕ್ಷಿ. ಅದರಲ್ಲೂ 369 ಸಂಖ್ಯೆಯ ಮೇಲಿನ ಅವರ ಪ್ರೀತಿ ಎಂಥದ್ದು ಎಂಬುದು ಅಭಿಮಾನಿಗಳಿಗೆ ಗೊತ್ತೇ ಇದೆ. ಇದೇ ಕಾರಣಕ್ಕೆ ಅವರ ಕಾರುಗಳ ಸಂಗ್ರಹಕ್ಕೆ '369 ಗ್ಯಾರೇಜ್' ಎಂಬ ಹೆಸರೂ ಇದೆ.