ಅಕ್ಟೋಬರ್ 2ರಂದು ದೇಶಾದ್ಯಂತ 'ನೋ ಯುಪಿಐ ಡೇ' (No UPI Day) ಆಚರಿಸಲು ಕರೆ ನೀಡಲಾಗಿದೆ ಎಂಬ ವರದಿಗಳನ್ನು ಪ್ರಮುಖ ವರ್ತಕರ ಒಕ್ಕೂಟ 'ಸಿಎಐಟಿ' ತೀವ್ರವಾಗಿ ನಿರಾಕರಿಸಿದೆ. ಗ್ರಾಹಕರು ಮತ್ತು ವರ್ತಕರಿಗೆ ಪಾರದರ್ಶಕ ವ್ಯವಸ್ಥೆಯಾಗಿರುವ ಯುಪಿಐ ಅನ್ನು ತಾನು ಬೆಂಬಲಿಸುತ್ತಾ ಬಂದಿರುವುದಾಗಿ ಅದು ಹೇಳಿದೆ.