ಬೆಂಗಳೂರು: ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಮತ್ತಷ್ಟು ರೈಲುಗಳು ಹಳೇಯ ಸಾಂಪ್ರದಾಯಿಕ ಐಸಿಎಫ್ ಬೋಗಿಗಳಿಂದ ಅತ್ಯಾಧುನಿಕ, ಸುರಕ್ಷಿತ ಮತ್ತು ಸುಧಾರಿತ ತಂತ್ರಜ್ಞಾನದ ಎಲ್‌ಎಚ್‌ಬಿ ಬೋಗಿಗಳಿಗೆ ಪರಿವರ್ತನೆಗೊಂಡಿವೆ. ಈ ಮಾರ್ಗದ ವಿಶೇಷ, ಎಕ್ಸ್‌ಪ್ರೆಸ್ ರೈಲುಗಳಿಗೆ ಲಿಂಕೆ ಹಾಫ್ ಮನ್ ಬುಷ್ (LHB) ಬೋಗಿಗಳನ್ನು ಅಳವಡಿಸಲು ರೈಲ್ವೆ ನಿರ್ಧರಿಸಿದೆ.