ಹಬ್ಬಗಳ ಸೀಸನ್, ಶುಭ ಕಾರ್ಯಗಳು ಶುರುವಾಯಿತೆಂದರೆ ಸಾಕು, ಮಹಿಳೆಯರ ಮನಸ್ಸು ಆಭರಣದ ಅಂಗಡಿಗಳತ್ತ ಹೋಗುವುದು ಸಹಜ. ಭಾರತೀಯರಿಗೆ, ಅದರಲ್ಲೂ ವಿಶೇಷವಾಗಿ ಕನ್ನಡಿಗರಿಗೆ ಚಿನ್ನ ಕೇವಲ ಒಂದು ಲೋಹವಲ್ಲ. ಅದು ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಆರ್ಥಿಕ ಭದ್ರತೆಯ ಸಂಕೇತ. ಯಾವುದೇ ಶುಭ ಕಾರ್ಯವಿರಲಿ, ಮದುವೆ ಮುಂಜಿಗಳಿರಲಿ, ಅಲ್ಲಿ ಬಂಗಾರಕ್ಕೆ ಅಗ್ರಸ್ಥಾನ ಇದ್ದೇ ಇರುತ್ತದೆ.