ಅಕ್ಟೋಬರ್ 6 ರಿಂದ ಆರಂಭವಾಗುವ ಭಾರತ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ವೆಸ್ಟ್ ಇಂಡೀಸ್ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಏಕದಿನ ಸರಣಿ ವೇಳೆ ಗಾಯಗೊಂಡ ಕೀಪರ್-ಬ್ಯಾಟ್ಸ್‌ಮನ್ ಜ್ಯುವೆಲ್ ಆಂಡ್ರ್ಯೂಸ್ ಬದಲಿಗೆ ಅಮೀರ್ ಜಂಗೂ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಇತ್ತೀಚೆಗೆ ಏಕದಿನ ಸರಣಿಯಲ್ಲಿ ಅಮೀರ್ ಜಂಗೂ ಉತ್ತಮ ಪ್ರದರ್ಶನ ನೀಡಿ 239 ರನ್ ಗಳಿಸಿದ್ದರು.