ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಹಣಕ್ಕಾಗಿ ಒಂದು ತಿಂಗಳ ನವಜಾತ ಶಿಶುವನ್ನು ಹೆತ್ತವರೇ ಮಾರಾಟ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಮಗು ಮಾರಿದ ಹಣದಲ್ಲಿ ಮೊಬೈಲ್, ಆಭರಣ ಖರೀದಿಸಿ ಮಜಾ ಮಾಡುತ್ತಿದ್ದ ದಂಪತಿ, ತಾಯಿಯ ಅನಾರೋಗ್ಯದ ಕಾರಣದಿಂದಾಗಿ ಸಿಕ್ಕಿಬಿದ್ದಿದ್ದಾರೆ.