ಬೆಂಗಳೂರು: ಬೆಲೆ ಏರಿಕೆಯ ಬಿಸಿಯಿಂದ ಕಂಗೆಟ್ಟಿದ್ದ ರಾಜ್ಯದ ಗ್ರಾಹಕರಿಗೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (KMF) ತುಸು ನೆಮ್ಮದಿ ನೀಡಿದೆ. ಇಂದಿನಿಂದ (ಭಾನುವಾರ, ನವೆಂಬರ್ 29, 2026) ರಾಜ್ಯಾದ್ಯಂತ ನಂದಿನಿ ಮೊಸರು ದರ ಇಳಿಕೆ ಜಾರಿಗೆ ಬಂದಿದ್ದು, ಪ್ರತಿ ಕೆ.ಜಿ ಅಂದರೆ 1 ಲೀಟರ್ ಮೊಸರಿನ ಮೇಲೆ 2 ರೂಪಾಯಿ ಹಾಗೂ ಅರ್ಧ ಕೆ.ಜಿ