ನಗೋಯಾ: ಗುರುವಾರ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಭಾರತ (India) ದಿನದ ಆರಂಭದಲ್ಲೇ ಎರಡು ಪದಕಗಳನ್ನು ಗೆಲ್ಲುವ ಮೂಲಕ ಉತ್ತಮ ಪ್ರದರ್ಶನ ನೀಡಿತು. ವುಶು (Wushu) ಸ್ಪರ್ಧೆಯಲ್ಲಿ ರೋಷಿಬಿನಾ ದೇವಿ ಬೆಳ್ಳಿ ಪದಕ ಗೆದ್ದರೆ, ರೋಯಿಂಗ್‌ನಲ್ಲಿ (Rowing) ಸತ್ನಾಂ ಸಿಂಗ್ ಮತ್ತು ಸಲ್ಮಾನ್ ಖಾನ್ ಜೋಡಿ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ.