ರಾಜ್ಯದಲ್ಲಿ ಬರ ಪರಿಹಾರ ವಿತರಣೆ ವಿಳಂಬ ಖಂಡಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೈತರಿಗೆ ಪರಿಹಾರ ನೀಡುವ ಇಚ್ಛಾಶಕ್ತಿ ಇಲ್ಲವೇ? ಖಜಾನೆ ಖಾಲಿಯಾಗಿದೆಯೇ? ಧೈರ್ಯವಿದ್ದರೆ ಅದನ್ನು ಸ್ಪಷ್ಟವಾಗಿ ಒಪ್ಪಿಕೊಳ್ಳಿ. ಅದನ್ನು ಬಿಟ್ಟು ಷರತ್ತುಗಳ ಜಾಲ ಹೆಣೆದು ರೈತರನ್ನು ಸತಾಯಿಸಬೇಡಿ.