ಭಾರತೀಯ ಫ್ಯಾಷನ್ ಜಗತ್ತಿನಲ್ಲಿ ನೀತಾ ಅಂಬಾನಿ ಅವರ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ. ಕೇವಲ ಆಧುನಿಕ ಉಡುಗೆಗಳಷ್ಟೇ ಅಲ್ಲದೆ, ತಮ್ಮ ವಿಶಿಷ್ಟ ಹಾಗೂ ಸಾಂಪ್ರದಾಯಿಕ ಉಡುಗೆಗಳ ಮೂಲಕ ಅವರು ಭಾರತದ ಮರೆಯಾಗುತ್ತಿರುವ ನೇಯ್ಗೆ ಮತ್ತು ಕರಕುಶಲ ಕಲೆಗಳಿಗೆ ಜಾಗತಿಕ ಮಟ್ಟದಲ್ಲಿ ಮರುಜೀವ ನೀಡುತ್ತಿದ್ದಾರೆ.