ಅನಂತ್ ಅಂಬಾನಿ ಶುಕ್ರವಾರ ವೃಂದಾವನಕ್ಕೆ ಆಗಮಿಸಿ ಗಿರಿರಾಜ್ ಜೀ ಮುಖಾರವಿಂದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಗೋವರ್ಧನ ಪರ್ವತದ ಪೂರ್ಣ ಪ್ರದಕ್ಷಿಣೆ ಕೈಗೊಂಡರು. ಅಜ್ಜ-ಅಜ್ಜಿಯರ ಆಶೀರ್ವಾದ ಮತ್ತು ಮಾರ್ಗದರ್ಶನದಿಂದ ತಾನು ಈ ಪವಿತ್ರ ಸ್ಥಳಕ್ಕೆ ಬಂದಿರುವುದಾಗಿ ಹೇಳಿದ ಅವರು, ದೇಶದ ಹಾಗೂ ಎಲ್ಲರ ಕಲ್ಯಾಣಕ್ಕಾಗಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.