ಬೆಂಗಳೂರು: ನಕಲಿ ಔಷಧಿ ದಂಧೆಯ (Fake Medicine) ಕಿಂಗ್‌ಪಿನ್‌ ಪ್ರಶಾಂತ್‌ನನ್ನ ಎಸ್‌ಐಟಿ (SIT) ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ ಪ್ರಶಾಂತ್ ಫೈಜರ್ ಕಂಪನಿಯ ಒರಿಜಿನಲ್ ಲೇಬಲ್‌ಗಳನ್ನು ಭಾರತಕ್ಕೆ ತಂದು ಬದಲಾವಣೆ ಮಾಡಿ ಔಷಧಗಳನ್ನ ಮಾರಾಟ ಮಾಡುತ್ತಿದ್ದ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ.