ಪಂಚ ಗ್ಯಾರಂಟಿಗಳ ಮೌಲ್ಯಮಾಪನ ಮಾಡಲು 14 ಕೋಟಿ ರೂ. ವೆಚ್ಚದಲ್ಲಿ 'ಕೆ-ಮಾನಿಟರ್' ಯೋಜನೆ ಜಾರಿಗೆ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸುಮಾರು 1 ಲಕ್ಷ ಫಲಾನುಭವಿಗಳಿಂದ ಅಭಿಪ್ರಾಯ ಸಂಗ್ರಹಿಸಿ, ಯೋಜನೆಯ ಉಪಯೋಗ ಹಾಗೂ ಅಗತ್ಯ ಬದಲಾವಣೆಗಳ ಬಗ್ಗೆ ವರದಿ ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.