ಈ 24 ಕೋಚ್‌ಗಳ ಹೊಸ ಸ್ಲೀಪರ್ ರೈಲಿನ ವಿನ್ಯಾಸವನ್ನು (Design) ಮುಂದಿನ ಒಂದು ತಿಂಗಳೊಳಗೆ ಅಂತಿಮಗೊಳಿಸಲಾಗುವುದು. ರೈಲ್ವೆ ಇಲಾಖೆಯು ಇದನ್ನು ಜೂನ್ 2027 ರ ವೇಳೆಗೆ ಹಳಿಗೆ ಇಳಿಸುವ ಗುರಿಯನ್ನು ಹೊಂದಿದೆ. ಇಂತಹ 50 ರೈಲುಗಳನ್ನು ತಯಾರಿಸುವ ಜವಾಬ್ದಾರಿಯನ್ನು ಚೆನ್ನೈನ ICF ಸಂಸ್ಥೆಗೆ ವಹಿಸಲಾಗಿದೆ. ಇದು ದೇಶದ ಅತಿ ಉದ್ದದ ಸ್ಲೀಪರ್ ರೈಲುಗಳಲ್ಲಿ ಒಂದಾಗಲಿದೆ.