ಸೂರತ್: ದೀಪಾವಳಿ ಹಬ್ಬವೆಂದರೆ ಕಾರ್ಮಿಕರಿಗೆ ಮತ್ತು ಉದ್ಯೋಗಿಗಳಿಗೆ ಎಲ್ಲಿಲ್ಲದ ಸಂಭ್ರಮ. ಹಬ್ಬದ ಪ್ರಯುಕ್ತ ಕಂಪನಿಗಳ ಮಾಲೀಕರು ನೀಡುವ ಬೋನಸ್ ಹಾಗೂ ಉಡುಗೊರೆಗಳಿಗಾಗಿ ಉದ್ಯೋಗಿಗಳು ವರ್ಷವಿಡೀ ಕಾತುರದಿಂದ ಕಾಯುತ್ತಿರುತ್ತಾರೆ. ಸಾಮಾನ್ಯವಾಗಿ ಕಂಪನಿಗಳು ಸಿಹಿ ತಿನಿಸುಗಳು, ಬಟ್ಟೆ, ಅಥವಾ ಒಂದಿಷ್ಟು ಹಣವನ್ನಾ ಬೋನಸ್ ಆಗಿ ನೀಡುತ್ತವೆ.