ಕೃತಕ ಬುದ್ಧಿಮತ್ತೆ ಮತ್ತು ವಿರಳ ಖನಿಜಗಳ ಕ್ಷೇತ್ರದ ಪೂರೈಕೆ ಸರಪಳಿಯನ್ನು ಚೀನಾ ಹಿಡಿತದಿಂದ ಬೇರ್ಪಡಿಸಲು ಅಮೆರಿಕ ನೇತೃತ್ವದ ಗುಂಪು ಸಿದ್ಧವಾಗಿದೆ. ಈ ಗುಂಪಿಗೆ ಭಾರತವೂ ಸೇರ್ಪಡೆಯಾಗಿದೆ. ಸ್ಯಾನ್ ಫ್ರಾನ್ಸಿಸ್ಕೋ ಡಿಕ್ಲರೇಶನ್​ಗೆ ಭಾರತ ಸಹಿ ಹಾಕಿದೆ. ಜಪಾನ್, ಸೌತ್ ಕೊರಿಯಾ, ಕತಾರ್, ಯುಎಇ, ವಿವಿಧ ಐರೋಪ್ಯ ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ.