ಬೆಂಗಳೂರು: ನಕಲಿ ಔಷಧಗಳ ಮಾರಾಟ ಜಾಲದ ಬಗ್ಗೆ ಎಸ್‌ಐಟಿ ತನಿಖೆಯಲ್ಲಿ (Fake Medicine) ಮಹತ್ವದ ಮಾಹಿತಿಗಳು ಬಹಿರಂಗವಾಗಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಮಾನ್ಯತೆ ಹೊಂದಿರುವ ZAVICEFTA ಮತ್ತು EMBLABEO ಎಂಬ ಎರಡು ಪ್ರಮುಖ ಆ್ಯಂಟಿ ಬಯೋಟಿಕ್ ಔಷಧಗಳನ್ನೇ ಆರೋಪಿಗಳು ಟಾರ್ಗೆಟ್‌ ಮಾಡಿಕೊಂಡಿದ್ದರು ಎನ್ನಲಾಗಿದೆ.