ಶಿವಮೊಗ್ಗ: ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಐಎಸ್‌ಎಲ್ ಕಾರ್ಖಾನೆಯ (VISL Factory) ಡಿಜಿಎಂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿ ನಗರದ ವಿಐಎಸ್ಎಲ್ ಅಧಿಕಾರಿಗಳ ಕ್ವಾಟ್ರಸ್‌ನಲ್ಲಿ ನಡೆದಿದೆ. ವಿಐಎಸ್ಎಲ್‌ನ ಎಲೆಕ್ಟ್ರಿಕ್ ಡಿಪಾರ್ಟ್ಮೆಂಟ್‌ನಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿದ್ದ ಗೋವಿಂದರಾಜ್ (51) ನೇಣಿಗೆ ಶರಣಾದ ವ್ಯಕ್ತಿ.