ಭಾರತೀಯ ರಿಸರ್ವ್​ ಬ್ಯಾಂಕ್​ ಒಂದು ಪ್ರಮುಖ ಮುನ್ಸೂಚನೆಯನ್ನು ಬಿಡುಗಡೆ ಮಾಡಿದೆ. ಭಾರತದ ಆರ್ಥಿಕ ಬೆಳವಣಿಗೆ ಬಲಿಷ್ಠವಾಗಿದ್ದರೂ, ಎಲ್ ನಿನೋ, ಆಹಾರ ಬೆಲೆಗಳು ಮತ್ತು ತೈಲ ಬೆಲೆಗಳ ಪ್ರಭಾವದಿಂದಾಗಿ ಹಣದುಬ್ಬರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.