ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ(Rain) ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ (KRS) ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನಿನ್ನೆ 9,475 ಕ್ಯೂಸೆಕ್‌ನಷ್ಟಿದ್ದ ಜಲಾಶಯದ ಒಳಹರಿವು, ಇಂದು 11,864 ಕ್ಯೂಸೆಕ್‌ಗೆ ತಲುಪಿದೆ.