ಮಡಿಕೇರಿ: ಕೊಡಗಿನ (Kodagu) ಸುಂಟಿಕೊಪ್ಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ (Community Health Centre) ಮೇಜರ್ ಸರ್ಜರಿಯೇ ಬೇಕಾಗಿದೆ. ಬಡವರ ಪಾಲಿನ ಸಂಜೀವಿನಿಯಾಗಬೇಕಿದ್ದ ಆಸ್ಪತ್ರೆ ಇಂದು ಅವ್ಯವಸ್ಥೆಯ ಸುಳಿಯಲ್ಲಿ ಸಿಲುಕಿದೆ. ವೈದ್ಯರು, ಸಿಬ್ಬಂದಿ ಕೊರತೆ ಜೊತೆಗೆ ಮೂಲಸೌಕರ್ಯಗಳ ನಿರ್ಲಕ್ಷ್ಯದಿಂದ ರೋಗಿಗಳು ಪರದಾಡುವಂತಾಗಿದೆ.